Saturday, May 16, 2020

ಕನ್ನಡ ವನ​: ಜನನಿ .. the first try

ಕನ್ನಡ ವನ​: ಜನನಿ .. the first try: ಜನನಿ   ಜನನಿ .. ಜನನಿ .. ಧರಣಿಗಿಂತ ಮಿಗಿಲು . ಮುಗಿಲು .. ಮುಗಿಲು ಅವಳ ಪ್ರೀತಿ ಮಡಿಲು . ಕಡಲಿಗೆ ತೀರದ ಕೊನೆ , ಲೋಕವೆ ತಾಯಿಯ ಮನೆ ಜೀವ ನೀಡಿದ...

ಜನನಿ .. the first try



ಜನನಿ

 

ಜನನಿ.. ಜನನಿ..ಧರಣಿಗಿಂತ ಮಿಗಿಲು.

ಮುಗಿಲು..ಮುಗಿಲು ಅವಳ ಪ್ರೀತಿ ಮಡಿಲು.

ಕಡಲಿಗೆ ತೀರದ ಕೊನೆ, ಲೋಕವೆ ತಾಯಿಯ ಮನೆ

ಜೀವ ನೀಡಿದವಳು , ನಿನ್ನ ಹೊತ್ತು ತಿರುಗಿದವಳು

ನಗುವ ಕಲಿಸಿದವಳೂ, ಯುಗದ ಮಾಯೆ ಇವಳು.

 

ಜೀವಾ ತೇಯ್ದಳು, ನಿನ್ನ ನಗುವಾ ನೊಡಲು.

ನೀನು ಹುಟ್ಟಿದೆ, ನೂರು ದೆವರಾ ಬೇಡಲು.

ಜಗವನೇ ಸೃಷ್ಠಿಸೊ ಮಾತೆ, ಅವಳೇ ಬಾಳಿನ ಗೀತೆ

ಜಗವ ನೋದದವಳು, ನಿನ್ನಲೇ ಜಗವ ನೋಡಿದವಳು.

ಉಸಿರ ಒಡತಿ ಇವಳು, ನಿನ್ನ ಬಾಳಿಗೊಡವೆ ಇವಳು.

 

ನೀನು ಬಿದ್ದರೆ , ನೆನೆದವು ಅವಳಾ ಕಂಗಳು,

ನಿನ್ನಾ ಗಾಯಕೆ ,ಅತ್ತಳು ಅವಳೂ ತಿಂಗಳು.

ಹೊರಗಿಸು ಹೃದಯದ ಮೇಲೆ, ನಿನಗಿದೆ ಗೆಲುವಿನ ನಾಳೆ

ಜಗವ ನೋದದವಳು, ನಿನ್ನಲೇ ಜಗವ ನೋಡಿದವಳು.

ಉಸಿರ ಒಡತಿ ಇವಳು, ನಿನ್ನ ಬಾಳಿಗೊಡವೆ ಇವಳು.

                                                                        --Shivaraj